Contact Us @ devaladakerepublications@gmail.com WhatsApp:+91 76760 97363
Our journey began in 2018, born out of a challenge many writers know too well—the struggle to find a publisher who truly understands and respects an author’s voice. What started as a personal setback soon transformed into a purpose-driven publication, created with the belief that stories deserve sincerity, care, and dignity.
Since our inception, we have proudly published five books, each reflecting our commitment to quality storytelling and meaningful content. One of our most cherished titles, Avalu, has been reprinted more than ten times, a journey made possible by the unwavering love of our readers. Our other publications continue to find their place in the market, steadily reaching readers who value authentic narratives.
We believe that books are not just products, but companions. While we do not offer complementary copies as a practice, we make conscious efforts to support students through special discounts. On occasion, we have also gifted books to passionate readers who genuinely wish to read but are unable to afford them—because the joy of reading should never be limited by circumstances.
At present, we focus solely on publishing our founder’s works, ensuring every book receives personal attention and uncompromised quality. Looking ahead, we are excited about the future. Very soon, we plan to open our doors to high-quality Kannada novels, providing a platform for powerful voices and stories that deserve to be heard.
Our story is still being written—shaped by perseverance, guided by values, and fueled by the belief that good literature can leave a lasting impact. We invite you to walk this journey with us, one book at a time - Devaladakere Publications.
Address:
Sakleshpura
Hassan District
Karnataka
ನಮ್ಮ ಪ್ರಯಾಣವು 2018ರಲ್ಲಿ ಆರಂಭವಾಯಿತು. ಒಬ್ಬ ಲೇಖಕರಾಗಿ ಸರಿಯಾದ ಪ್ರಕಾಶಕರನ್ನು ಹುಡುಕುವಲ್ಲಿ ಎದುರಿಸಿದ ಸವಾಲುಗಳು ಈ ಪ್ರಕಟಣಾ ಸಂಸ್ಥೆಯ ಜನ್ಮಕ್ಕೆ ಕಾರಣವಾಯಿತು. ವೈಯಕ್ತಿಕ ಸಂಕಷ್ಟದಿಂದ ಹುಟ್ಟಿದ ಈ ಪ್ರಯತ್ನ, ಶೀಘ್ರದಲ್ಲೇ ಉದ್ದೇಶಪೂರ್ಣ ಕನಸಾಗಿ ರೂಪಾಂತರಗೊಂಡಿತು. ಲೇಖಕರ ಧ್ವನಿಗೆ ಗೌರವ ನೀಡುವ, ಕಥೆಗಳ ಆತ್ಮಸಾರವನ್ನು ಕಾಪಾಡುವ ಪ್ರಕಾಶನವಾಗಬೇಕೆಂಬ ನಂಬಿಕೆಯೊಂದಿಗೆ ಈ ಪಯಣ ಪ್ರಾರಂಭವಾಯಿತು.
ಇಂದಿನವರೆಗೂ ನಾವು ಐದು ಪುಸ್ತಕಗಳನ್ನು ಯಶಸ್ವಿಯಾಗಿ ಪ್ರಕಟಿಸಿದ್ದೇವೆ. ಅವುಗಳಲ್ಲಿ 'ಅವಳು' ಕಾದಂಬರಿ ಓದುಗರ ಅಪಾರ ಮೆಚ್ಚುಗೆ ಪಡೆದು ಹತ್ತಕ್ಕೂ ಹೆಚ್ಚು ಬಾರಿ ಮುದ್ರಣವಾಗಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯ. ಉಳಿದ ಪುಸ್ತಕಗಳೂ ಸಹ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ನಿಧಾನವಾಗಿ ಆದರೆ ಯಶಸ್ವಿಯಾಗಿ ಓದುಗರ ಹೃದಯ ತಲುಪುತ್ತಿವೆ.
ನಾವು ಪುಸ್ತಕಗಳನ್ನು ಕೇವಲ ವ್ಯಾಪಾರ ದೃಷ್ಠಿಯಿಂದ ನೋಡದೆ, ಓದುಗರ ಜೊತೆ ಬೆಸೆದು ಬದುಕುವ ಸಂಗಾತಿಗಳೆಂದು ನಂಬುತ್ತೇವೆ. ಆದ್ದರಿಂದ, ಸಾಮಾನ್ಯವಾಗಿ ಉಚಿತ ಪ್ರತಿಗಳನ್ನು ನೀಡುವುದಿಲ್ಲ. ಆದರೆ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿಗಳನ್ನು ನೀಡುತ್ತೇವೆ. ಕೆಲವೊಮ್ಮೆ ಓದಲು ಆಸಕ್ತಿ ಇದ್ದು, ಪುಸ್ತಕ ಖರೀದಿಸಲು ಸಾಧ್ಯವಿಲ್ಲದವರಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಿರುವುದೂ ನಮಗೆ ಖುಷಿಯ ವಿಷಯ.
ಪ್ರಸ್ತುತ ನಾವು ನಮ್ಮ ಸಂಸ್ಥಾಪಕರ ಕೃತಿಗಳನ್ನಷ್ಟೇ ಪ್ರಕಟಿಸುತ್ತಿದ್ದು, ಪ್ರತಿಯೊಂದು ಪುಸ್ತಕಕ್ಕೂ ವಿಶೇಷ ಕಾಳಜಿಯೊಂದಿಗೆ ಉತ್ತಮ ಗುಣಮಟ್ಟ ನೀಡಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಗುಣಮಟ್ಟದ ಕನ್ನಡ ಕಾದಂಬರಿಗಳನ್ನು ನಮ್ಮ ಪ್ರಕಾಶನದಿಂದ ಪ್ರಕಟಿಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ. ಹೊಸ ಧ್ವನಿಗಳಿಗೆ ವೇದಿಕೆ ಕಲ್ಪಿಸುವ ಮಹತ್ತರವಾದ ಹಾದಿಯಲ್ಲಿ ನಾವು ಹೆಜ್ಜೆ ಇಡಲಿದ್ದೇವೆ.
ನಮ್ಮದು ಈಗಷ್ಟೇ ಪ್ರಾರಂಭವಾಗಿರುವ ಕಥೆ. 'ಸಹನೆ, ಮೌಲ್ಯಗಳು ಮತ್ತು ಉತ್ತಮ ಸಾಹಿತ್ಯ' ಸಮಾಜದ ಮೇಲೆ ಶಾಶ್ವತ ಪ್ರಭಾವ ಬೀರುತ್ತದೆ ಎಂಬ ನಂಬಿಕೆಯೊಂದಿಗೆ ಬರೆಯುತ್ತಿರುವ ಅಧ್ಯಾಯ. ಒಂದೊಂದು ಪುಸ್ತಕದ ಮೂಲಕವೂ ಈ ಪ್ರಯಾಣದಲ್ಲಿ ನಮ್ಮೊಡನೆ ಹೆಜ್ಜೆ ಹಾಕುವಂತೆ ನಿಮ್ಮನ್ನು ಆಹ್ವಾನಿಸುತ್ತೇವೆ. ನಿಮ್ಮ ಪ್ರೀತಿ ಮತ್ತು ಬೆಂಬಲದ ನಿರೀಕ್ಷೆಯಲ್ಲಿ - ದೇವಾಲದಕೆರೆ ಪ್ರಕಾಶನ.